ರಾಗಿಣಿ ದ್ವಿವೇದಿ ಸಂಪೂರ್ಣ ಪರಿಚಯ

4 days ago
10

ರಾಗಿಣಿ ದ್ವಿವೇದಿ ಕನ್ನಡ ಚಿತ್ರರಂಗದ ಪ್ರಸಿದ್ಧ ನಟಿ ಮತ್ತು ರೂಪದರ್ಶಿ. ಅವರು 24 ಮೇ 1990ರಂದು ಬೆಂಗಳೂರಿನಲ್ಲಿ ಜನಿಸಿದರು. ತಂದೆ ರಾಕೇಶ್ ಕುಮಾರ್ ದ್ವಿವೇದಿ, ತಾಯಿ ರೋಹಿಣಿ ದ್ವಿವೇದಿ. ಸಹೋದರ ರುದ್ರಾಕ್ಷ ದ್ವಿವೇದಿ. ಇವರ ಕುಟುಂಬ ಮೂಲತಃ ಉತ್ತರ ಪ್ರದೇಶದವರು.

2008ರಲ್ಲಿ ರೂಪದರ್ಶಿಯಾಗಿ ತಮ್ಮ ಪ್ರಯಾಣ ಆರಂಭಿಸಿದ ರಾಗಿಣಿ, 2009ರಲ್ಲಿ ವೀರ ಮದಕರಿ ಸಿನಿಮಾದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದರು. ಬಳಿಕ ಕನ್ನಡದ ಜೊತೆಗೆ ತೆಲುಗು, ತಮಿಳು ಮತ್ತು ಮಲಯಾಳಂ ಭಾಷೆಯ ಚಿತ್ರಗಳಲ್ಲಿಯೂ ನಟಿಸಿದ್ದಾರೆ.ಇವರು ತಮ್ಮ ಗ್ಲಾಮರ್, ಅಭಿನಯ ಹಾಗೂ ವೈವಿಧ್ಯಮಯ ಪಾತ್ರಗಳ ಮೂಲಕ ಪ್ರೇಕ್ಷಕರ ಹೃದಯ ಗೆದ್ದಿದ್ದಾರೆ.

Loading comments...