hare Krishna

8 days ago
28

*ಶ್ರೀ ಸತ್ಯಸಂಕಲ್ಪ ತೀರ್ಥರು*‌ಹಾಗೂ ಶ್ರೀ ಸತ್ಯನಾಥ ಯತಿ*
#UttaradiMutt #UttaradiMath
ಇವರು ಬರಗಾಲದ ಪರಿಸ್ಥಿತಿಯಲ್ಲಿ ೧೦ ವರ್ಷಗಳ ವರೆಗೆ ತನ್ನ ಮಠದ ಬಂಗಾರ ಮತ್ತು ವಜ್ರದ ಮಂಟಪಗಳನ್ನು ಒತ್ತೆ ಇಟ್ಟು ಜನರಿಗೆ ಅನ್ನ- ನೀರು ದಾನ ಮಾಡಿದ ಮಹಾನುಭಾವರು*

*ಶ್ರೀ ಸತ್ಯಧರ್ಮರ ಶಿಷ್ಯರು,ಮಹಾತಪಸ್ವಿಗಳು ವಿರಕ್ತರೂ ಆದ ಶ್ರೀ ಶ್ರೀ ಸತ್ಯಸಂಕಲ್ಪ ತೀರ್ಥರು.*

"ಸತ್ಯಧರ್ಮಾಬ್ಧಿಸಂಭೂತ: ಚಿಂತಾಮಣಿವಿಜೃಂಭಿತ: |

ಸತ್ಯಸಂಕಲ್ಪಕಲ್ಪದ್ರು: ಕಲ್ಪಯೇತ್ ಕಾಮಧುಕ್ ಮಮ" ||

ಶ್ರೀಮದಾಚಾರ್ಯರಿಂದ ಅಲಂಕೃತವಾದ ಉತ್ತರಾದಿ ಮಠದ ೨೯ನೆಯ ಪೀಠಾಧಿಪತಿಗಳು. ಇವರ
ಆಶ್ರಮ ಗುರುಗಳು ಶ್ರೀ ಸತ್ಯಧರ್ಮರು. (ಹೊಳೆಹೊನ್ನೂರು.)
ಆಶ್ರಮ ಶಿಷ್ಯರು ಶ್ರೀ ಸತ್ಯ ಸಂತುಷ್ಟ ತೀರ್ಥರು. (ಮೈಸೂರು)

ಇವರು ಪೀಠದಲ್ಲಿ ವಿರಾಜಮಾನರಾದ ಅವಧಿ ೧೮೩೦ ರಿಂದ ೧೮೪೧.
ಇವರ ಪೂರ್ವಾಶ್ರಮದ ಹೆಸರು ಶ್ರೀನಿವಾಸಾಚಾರ್ಯ ನವರತ್ನ.

ಶ್ರೀ ಸತ್ಯಧರ್ಮರ ಪೂರ್ವಾಶ್ರಮದ ಅನುಜರು. (ಸಹೋದರರು)
ಮೈಸೂರು ಮಹಾರಾಜರಿಂದ
ನವರತ್ನಗಳ ಅಭಿಷೇಕ ಮಾಡಿಸಿಕೊಂಡ ಮಹಿಮರು.

ಕರ್ಜಗಿ ಯಲ್ಲಿ ಬರಗಾಲದ ಪರಿಸ್ಥಿತಿ. ಅಲ್ಲಿಯ ಜನರಿಗೆ ತಿನ್ನಲು ಊಟವಿಲ್ಲ. ಅಂಥ ಸಂಧರ್ಭದಲ್ಲಿ
೧೦ ವರ್ಷಗಳ ವರೆಗೆ ಮಠದ ಬಂಗಾರ ಮತ್ತು ವಜ್ರದ ಮಂಟಪಗಳನ್ನು ಒತ್ತೆ ಇಟ್ಟು ಅನ್ನದಾನ ಮಾಡಿದ ಮಹಾನುಭಾವರು. ಹೀಗಾಗಿ ಶ್ರೀ ರಾಮದೇವರನ್ನು ವಜ್ರಮಂಟಪದಲ್ಲಿ ಕುಳ್ಳಿರಿಸಿ
ಪೂಜೆಯನ್ನು ಮಾಡಲಾಗಲಿಲ್ಲ.
ಪ್ರಕಾಂಡ ಪಂಡಿತರಾದ ಹುಲಗಿ ಆಚಾರ್ಯರಿಗೆ ಮಂತ್ರಾಕ್ಷತೆ ನೀಡಿ ಕಬ್ಬಿಣದ ಕಡಲೆ ಯoತಿರುವ ಗ್ರಂಥ *ದ್ವೈತ* *ಧ್ಯೂಮಣಿ* ಎಂಬ ಗ್ರಂಥ ಬರೆಸಿದವರು. ಹುಲಗಿ ಆಚಾರ್ಯರು ಗ್ರಂಥದ ಕೊನೆಗೆ
ಗುರುಗಳ ಮಂತ್ರಾಕ್ಷತೆ ಬಲದಿಂದ ಗ್ರಂಥ ಪರಿಸಮಾಪ್ತಿ ಯಾಯಿತು ಎಂದು ಗುರುಗಳನ್ನು ನಮಸ್ಕರಿಸಿರುವರು. ಗುರುಗಳ ಸಂಕಲ್ಪ ನೆರವೇರಿತು. *ಸತ್ಯ* *ಸಂಕಲ್ಪ* ಎಂಬ ಗುರುಗಳ ಹೆಸರು ಅನ್ವರ್ಥಕವಾಯಿತು. ಸಾರ್ಥಕವಾಯಿತು.
ಗಂಗಾದೇವಿಯನ್ನು ಪ್ರತ್ಯಕ್ಷೀಕರಿಸಿ ಕೊಂಡವರು.
ಇವತ್ತಿಗೂ ಮೈಸೂರಿನ ಅವರ
ವೃಂದಾವನ ಮೇಲೆ ಗಂಗಾ ಸೆಲೆ ಕಾಣಬಹುದು. ವೃಂದಾವನ ಎಷ್ಟು ವರೆಸಿದರೂ ವೃಂದಾವನ ಹಸಿಯಾಗಿರುವದು.
ತಮ್ಮ ಸುಂದರ ಅಕ್ಷರಗಳಿಂದ ಸರ್ವಮೂಲ ಮತ್ತು
ಶ್ರೀಮನ್ಯಾಯ ಸುಧಾ ಗ್ರಂಥ ಬರೆದಿರುವುದು ಇವರ ಹೆಗ್ಗಳಿಕೆ.
ಆಷಾಡ ಶುಕ್ಲ ಪೂರ್ಣಿಮಾ ದಿವಸ ಮೈಸೂರಿನಲ್ಲಿ ವೃಂದಾವನಸ್ಥರಾದರು.

ಎದುರಾರೈ ಗುರುವೆ ನಿನಗೆ ಸಮನಾರ

ಶ್ರೀಸತ್ಯನಾಥತೀರ್ಥರು ಹಾಗೂ ಶ್ರೀಸತ್ಯಾಭಿನವತೀರ್ಥರು ಸ್ತುತಿಸಿದ ಶ್ರೀಜಯತೀರ್ಥರು.
ಅತ್ಯಂತ ವಿದ್ವತ್ಪೂರ್ಣವಾದ ಗ್ರಂಥಗಳನ್ನು ರಚಿಸಿ, ಪರವಾದಿಗಳನ್ನು ತಮ್ಮ ವಾಗ್ವಿಭವದಿಂದ ಮಣಿಸಿ ಶ್ರೀಮಧ್ವಮುನಿಗಳ ಸಿದ್ಧಾಂತದ ಮಹತಿಯನ್ನು ಸಾರಿದ ಮಹಾನುಭಾವರು.

#karnatakatourism #karnataka #travelkarnataka #india #bangalore #kannada #travelphotography #travel #bengaluru #mysore #incredibleindia

ಶ್ರೀಸತ್ಯನಾಥ ಯತಿವರರು. "ಮಾಯಾವಾದ ಖಂಡನ ಟೀಕಾಟಿಪ್ಪಣಿ', ಕರ್ಮನಿರ್ಣಯಕ್ಕೆ 'ಕರ್ಮಪ್ರಕಾಶಿಕಾ' ಟಿಪ್ಪಣಿ, ಶ್ರೀಮನ್ನ್ಯಾಯಸುಧಾ ಟಿಪ್ಪಣಿ, ಋಗ್ಭಾಷ್ಯಟೀಕಾ ಟಿಪ್ಪಣಿ, ಪ್ರಮಾಣಪದ್ಧತಿಗೆ 'ಅಭಿನವಾಮೃತ' ಟಿಪ್ಪಣಿ, 'ಮಿಥ್ಯಾತ್ವಾನುಮಾನ ಖಂಡನಾ ಟಿಪ್ಪಣಿ', 'ಉಪಾಧಿ ಖಂಡನಾ ಟಿಪ್ಪಣಿ', 'ಅಭಿನವ ಚಂದ್ರಿಕಾ', 'ಅಭಿನವಗದಾ', 'ಅಭಿನವ ತರ್ಕತಾಂಡವ', 'ವಿಜಯಮಾಲಾ' ಮೊದಲಾದಂತಹ ಅನೇಕ ಕೃತಿಗಳನ್ನು ಶ್ರೀಸತ್ಯನಾಥತೀರ್ಥರು ರಚಿಸಿದ್ದು

ತನ್ಮೂಲಕ ಶ್ರೀವೇದವ್ಯಾಸ,ಮಧ್ವರ, ಶ್ರೀಜಯತೀರ್ಥರ ಸೇವೆಯನ್ನು ವಿಶೇಷವಾಗಿ ಮಾಡಿದ್ದಾರೆ.

ಶ್ರೀಜಯತೀರ್ಥಗುರುಸಾರ್ವಭೌಮರ 'ಮಾಯಾವಾದ ಖಂಡನ ಟೀಕಾ'ಗ್ರಂಥಕ್ಕೆ ಟಿಪ್ಪಣಿ, ಶ್ರೀಮನ್ನ್ಯಾಯಸುಧಾಗ್ರಂಥಕ್ಕೆ ಟಿಪ್ಪಣಿ, ಋಗ್ಭಾಷ್ಯಟೀಕಾ ಕೃತಿಗೆ ಟಿಪ್ಪಣಿ,ಪ್ರಮಾಣ ಪದ್ಧತಿ ಕೃತಿಗೆ ಟಿಪ್ಪಣಿಗಳನ್ನು ರಚಿಸಿರುವ ಶ್ರೀಸತ್ಯನಾಥ ಶ್ರೀಮಚ್ಚರಣರಿಗೆ ಶ್ರೀಜಯತೀರ್ಥಗುರುಸಾರ್ವಭೌಮರಲ್ಲಿ ಅತೀವವಾದ ಪೂಜ್ಯಭಾವ ಹೊಂದಿದ್ದರು.

ತಮ್ಮ 'ಅಭಿನವ ಚಂದ್ರಿಕಾ' ಕೃತಿಯಲ್ಲಿ "ಶ್ರೀಮದ್ಭಾಷ್ಯಂ ಯಥಾಚಾರ್ಯಭಾವಂ ಯೈ: ಸುಪ್ರಕಾಶಿತಮ್
ವಂದೇ ತಾನ್ ಜಯತೀರ್ಥಾರ್ಯಾನ್ ಯೈ: ಸುಧಾ ನಿರ್ಮಿತಾ ಮುದಾ" ಎಂಬುದಾಗಿ ಶ್ರೀಮಧ್ವಭಾಷ್ಯದ ಭಾವವನ್ನು ಪ್ರಕಾಶಪಡಿಸಿದ ಶ್ರೀಮನ್ನ್ಯಾಯಸುಧಾಕಾರರಾದ ಶ್ರೀಜಯತೀರ್ಥಮುನಿಗಳನ್ನು ಸ್ತುತಿಸಿದ್ದಾರೆ. ಶ್ರೀಜಯತೀರ್ಥಗುರುಸಾರ್ವಭೌಮರ 'ಋಗ್ಭಾಷ್ಯಟೀಕಾ' ಕೃತಿಗೆ ತಾವು ರಚಿಸಿರುವ ಟಿಪ್ಪಣಿಯಲ್ಲಿ
'ನಮಾಮಿ ಜ್ಞಾನ ಸಿದ್ದ್ಯರ್ಥಂ ಪೂರ್ಣಪ್ರಜ್ಞಂ ಜಗದ್ಗುರುಮ್
ಜಯತೀರ್ಥಮುನಿಂ ಸರ್ವಶಾಸ್ತ್ರಜ್ಞಂ ವರದಂ ಗುರುಮ್" ಎಂಬುದಾಗಿ ಜಗದ್ಗುರುಗಳಾದ ಶ್ರೀಪೂರ್ಣಪ್ರಜ್ಞರನ್ನು, ಸರ್ವಶಾಸ್ತ್ರಜ್ಞರಾದ ಶ್ರೀಜಯತೀರ್ಥಮುನಿಗಳನ್ನು ಸ್ತುತಿಸಿದ್ದಾರೆ.
#photography #sandalwood #karnatakafocus #nature #ig #nammakarnataka #incrediblekarnataka #karnatakaphotographers #karnatakapictures #karnatakadiaries #kannadaactress #kannadasongs #udupi #mysuru #focus #hampi #yash #kannadamusically #nammabengaluru

ಶ್ರೀಸತ್ಯನಾಥತೀರ್ಥರಿಂದ ತುರೀಯಾಶ್ರಮವನ್ನು ಸ್ವೀಕರಿಸಿ,ಶ್ರೀಮನ್ಮಧ್ವಾಚಾರ್ಯರ 'ಶ್ರೀಮದ್ಭಾಗವತ ತಾತ್ಪರ್ಯ' ಕೃತಿಗೆ ಮಾತ್ಸರ್ಯಯುತರಾದ ಪರಮತೀಯ ವಿದ್ವಾಂಸರು ಮಾಡಿರುವ ಆಕ್ಷೇಪಗಳನ್ನು ಉಲ್ಲೇಖಿಸಿ, ವಿಮತೀಯರ ಆಕ್ಷೇಪಗಳು ಎಷ್ಟು ನಿರಾಧಾರವಾದವು ಮತ್ತು ಶ್ರೀಮದಾಚಾರ್ಯರ ಕೃತಿ ಎಷ್ಟು ನಿರ್ದುಷ್ಟವಾದುದು ಎಂಬುದನ್ನು ತಮ್ಮ 'ದುರ್ಘಟಭಾವದೀಪ' ಎಂಬ ಶ್ರೀಮದ್ಭಾಗವತ ತಾತ್ಪರ್ಯನಿರ್ಣಯ ವ್ಯಾಖ್ಯಾನ ಕೃತಿಯ ಮೂಲಕ ಎತ್ತಿ ಹಿಡಿದ ಯತಿವರರು.

ಶ್ರೀಸತ್ಯಾಭಿನವ ಶ್ರೀಮಚ್ಚರಣರು. ಶ್ರೀಮಧ್ವಭಗವತ್ಪಾದರ ಮಹಾಭಾರತ ತಾತ್ಪರ್ಯನಿರ್ಣಯ ಕೃತಿಗೂ ವ್ಯಾಖ್ಯಾನವನ್ನು ರಚಿಸಿರುವ ಶ್ರೀಸತ್ಯಾಭಿನವರು ತಮ್ಮ 'ಸತ್ಯನಾಥ ಗುರುಪರಂಪರಾಸ್ತೋತ್ರ'ವೆಂಬ ಕೃತಿಯಲ್ಲಿ ಶ್ರೀಜಯತೀರ್ಥಗುರುಸಾರ್ವಭೌಮರನ್ನು ಹೀಗೆ ಸ್ತುತಿಸಿದ್ದಾರೆ.
"ಜಯತೀರ್ಥ ಗುರೋ ರಕ್ಷ ಜಯತೀರ್ಥ ಕೃಪಾಕರ
ಜಯತೀರ್ಥ ಸುಧಾಪಾನ ಜಯತೀರ್ಥ ಗುರುಸ್ತುತ"
ಯತಿವರರಿಂದ ಸ್ತುತರಾದ
ಇಂಥ ಗುರುಗಳ ಅನುಗ್ರಹ ನಮ್ಮೆಲ್ಲರಿಗೆ ಸದಾ ಇರಲಿ.
ಶ್ರೀ ಕೃಷ್ಣಾರ್ಪಣ ಮಸ್ತು.🙏🙏🌹🌹

https://youtu.be/nnv3eT1cASU?si=KZGba5NVpZErP-NW

Loading 1 comment...