om Mahalaxmi

8 days ago
4

ಶ್ರೀ ಕೊಲ್ಲಾಪುರದಮ್ಮ🙏
*ಅತಿಥಿಗಳಿಗೆ ಯಾವುದೇ ವಸ್ತು
ಬೇಕಾದರೂ ಮನೆಯ ಯಜಮಾನನ್ನೇ ಕೇಳಬೇಕು*
#srinivasa #govinda #pochampally #silk

ಶ್ರೀನಿವಾಸ ಮಂತ್ರ-*ಓಂ ನಮೋ ಶ್ರೀನಿವಾಸಾಯ*

ಶ್ರೀನಿವಾಸ ಮಂತ್ರವೆಂದರೆ ವಿಷ್ಣುವಿನ ಅವತಾರವಾದ ಶ್ರೀನಿವಾಸನನ್ನು ಸ್ತುತಿಸುವ ಮಂತ್ರ. "ಓಂ ನಮೋ ಶ್ರೀನಿವಾಸಾಯ" ಎಂಬುದು ಸರಳವಾದ ಮತ್ತು ಪ್ರಸಿದ್ಧವಾದ ಮಂತ್ರವಾಗಿದೆ.

#tirupati #silksarees #tirumala #narayana #kanchi #ಶ್ರೀ #ನಾಮ #hill #om #temple

ಓಂ ನಮೋ ವೆಂಕಟೇಶಾಯ:
ಇದು ಸಹ ಶ್ರೀನಿವಾಸನನ್ನು ಸ್ತುತಿಸುವ ಮತ್ತೊಂದು ಜನಪ್ರಿಯ ಮಂತ್ರ.

ಶ್ರೀನಿವಾಸ ಗಾಯತ್ರಿ ಮಂತ್ರ:
"ಓಂ ನಾರಾಯಣಾಯ ವಿದ್ಮಹೇ| ವಾಸುದೇವಾಯ ಧೀಮಹಿ| ತನ್ನೋ ವಿಷ್ಣುಃ ಪ್ರಚೋದಯಾತ್||"
ಎಂಬುದು ಶ್ರೀನಿವಾಸ ಗಾಯತ್ರಿ ಮಂತ್ರ.

"ಚಂದ್ರಾಂ ಹಿರಣ್ಮಯೀಂ ಲಕ್ಷ್ಮೀಂ ಜಾತವೇದೋ ಮ ಆವಹ" ಎಂಬುದು ಶ್ರೀನಿವಾಸ ವಿದ್ಯಾ ಮಂತ್ರದ ಒಂದು ಭಾಗವಾಗಿದೆ.

#Book #story #Chethana #Oldest #culture #tradition #mantra #ಸನಾತನ #ಗೌಡ #yogi #riya #swami #ಶ್ರೀಮತಿ #ಭಾರತ #truth #trust #ಮಠ #raya #ದಾಸ #ಕೃಷ್ಣ #ರಾಮ #ಈಶ್ವರ

*ಬೇಡಿದರೆ ಎನ್ನ ಒಡೆಯನ ಬೇಡುವೆ*
ಈಶಾವಾಸ್ಯಮಿದಂ ಸರ್ವಂ ಯತ್ಕಿಂಚ ಜಗತ್ಯಾಂ ಜಗತ್|
ತೇನ ತ್ಯಕ್ತೇನ ಭುಂಜೀಥಾಃ ಮಾ ಗೃಧಃ ಕಸ್ಯಸ್ವಿದ್ಧನಮ್||

ಅಸಂಖ್ಯಜೀವರು,ಅಗಣಿತವಸ್ತುಗಳಿಂದ ತುಂಬಿದ ಈ ಜಗತ್ತು ಯಾವ ಪ್ರಕೃತಿಯನ್ನು
ಆಶ್ರಯಿಸಿದೆಯೋ, ಆ ಜಗತ್ತು ಮತ್ತು ಈ ಪ್ರಕೃತಿ ಎಲ್ಲವೂ ಹರಿಯ ವಾಸಕ್ಕೆ ಯೋಗ್ಯ ಮನೆ.
ನಾವು ಇದರಲ್ಲಿ ವಾಸಕ್ಕೆ ಬಂದ ಅತಿಥಿಗಳು ಮಾತ್ರ. ಅತಿಥಿಗಳಿಗೆ ಯಾವುದೇ ವಸ್ತು
ಬೇಕಾದರೂ ಮನೆಯ ಯಜಮಾನನ್ನೇ ಕೇಳಬೇಕು. ಮನೆಯ ಮಕ್ಕಳ ಬಳಿ ಏನಾದರೂ
ಕೇಳಿದರೆ ಅವು ಓಡಿ ಹೋಗಿ ತಂದೆಯ ಬಳಿ ಹೇಳಿ ಆಮೇಲೆ ಅವನು ಕೊಟ್ಟಾಗ ಅದನ್ನು
ಅತಿಥಿಗಳಿಗೆ ನೀಡಬೇಕು. ಹಾಗಾಗಿ ಜಗದೀಶನಾದ ಹರಿಯು ನೀಡಿದ್ದೇ ನಿನ್ನ ಜೀವನದ
ಸರ್ವಸ್ವವಾಗಲಿ.
ಈ ಮಂತ್ರದ ವ್ಯಾಖ್ಯಾನದಂತೆ ಇರುವ ವಾದಿರಾಜತೀರ್ಥರ ಮಾತೊಂದು ಹೀಗಿದೆ :-

ವಿತ್ತೈಃ ರಿಕ್ತೋSಪಿ ಜಾತ್ಯುಚ್ಚಃ ನಾತ್ಯಲ್ಪಮುಪಸರ್ಪತಿ|
ಸುಕ್ಷೀಣರ್ಕ್ಷೇಶರಕ್ಷಾ ಸ್ಯಾದರ್ಕೋದರ್ಕಶ್ರಿಯೈವ ಹಿ ||

ಉತ್ತಮಜೀವಿಯು ತಾನು ಬಡವನಾದರೂ ಕೂಡ ಲೌಕಿಕಧನಿಕನ ಬಳಿಯಿಂದ ಸಂಪತ್ತನ್ನು ಆಶಿಸುವುದಿಲ್ಲ. ಯಾಕೆಂದರೆ "ಮಾ ಗೃಧಃ ಕಸ್ಯಚಿತ್ ಧನಂ" ಈ ಜಗತ್ತಿನಲ್ಲಿರು ಸಂಪತ್ತೆಲ್ಲವೂ
ಜಗದೀಶನಾದ ಲಕ್ಷ್ಮೀಶನದ್ದು.ಕೇಳಿದರೆ ಅವನ ಬಳಿ ಕೇಳುವನು.ಈ ವಿಷಯಕ್ಕೆ ಸಂಬಂಧಿಸಿದಂತೆ ಇರುವ ಮಾತೊಂದನ್ನು ಕಾಳಿದಾಸನು ಆಡಿರುವನು:-

ಜಾತಂ ವಂಶೇ ಭುವನವಿದಿತೇ ಪುಷ್ಕರಾವರ್ತಕಾನಾಂ
ಜಾನಾಮಿ ತ್ವಾಂ ಪ್ರಕೃತಿಪುರುಷಂ ಕಾಮರೂಪಂ ಮಘೋನಃ|
ತೇನಾರ್ಥಿತ್ತ್ವಂ ತ್ವಯಿ ವಿಧಿವಶಾತ್ ದೂರಬಂಧುರ್ಗತೋSಹಂ
ಯಾಂಚಾ ಮೋಘಾ ವರಮಧಿಗುಣೇ ನಾಧಮೇ ಲಬ್ಧಕಾಮಾ||

ದೊಡ್ಡವರ ಬಳಿ ಕೈ ಚಾಚಿ ಇಲ್ಲವೆನಿಸಿಕೊಳ್ಳುವುದು ಮೇಲು.
ಸಣ್ಣವನ ಬಳಿ ಕೈ ತುಂಬ ಪಡೆದುಕೊಂಡು ಬರುವುದಕ್ಕಿಂತ.
ಹಾಗದರೆ ಆ ಉತ್ತಮಜೀವಿಯ ಜೀವನನಿರ್ವಹಣೆ ಹೇಗಾಗುವುದು ಎಂದರೆ?

ಸುಕ್ಷೀಣ - ಋಕ್ಷೇಶ - ರಕ್ಷಾ ಅರ್ಕೋದರ್ಕಶ್ರಿಯೈವ ಹಿ =

ಹದಿನೈದು ಕಲೆಗಳನ್ನು ಕಳೆದುಕೊಂಡು ಚಂದ್ರನು ಅಮಾವಾಸ್ಯೆಯ ದಿನ ಸೂರ್ಯನನ್ನು
ಸಮೀಪಿಸಿ ಅವನಿಂದ ಸುಷುಮ್ನಾ ಎಂಬ ಒಂದು ತೇಜಸ್ಸಿನ ಕಲೆಯನ್ನು ಪಡೆದುಕೊಂಡು
ಪ್ರತಿಪತ್ ತಿಥಿಯಿಂದ ಹುಣ್ಣಿಮೆಯವರೆಗೆ ಅಭಿವೃದ್ಧಿಹೊಂದುತ್ತಾನೋ ಹಾಗೆಯೇ
ಉತ್ತಮಜೀವಿಯೂ ಕೂಡ ತನ್ನ ಆಪತ್ತಿನ ಪರಿಹಾರಕ್ಕೆ ಸಂಪತ್ತಿನ ಪ್ರಾಪ್ತಿಗೆ ಸರ್ವೋತ್ತಮನಾದ
ಭಗವಂತನನ್ನೇ ಆಶ್ರಯಿಸುತ್ತಾನೆ.
ವಾದಿರಾಜಸ್ವಾಮಿಗಳ ಈ ಮಾತಿಗೆ ದೃಷ್ಟಾಂತವೆನಿಸುವಂತಿರು ಈ ವ್ಯಕ್ತಿ:-

ಜೀವಜಾತಿಯಲ್ಲೇ ಅತ್ತ್ಯುತ್ತಮನೆನಿಸಿದ ಭೀಮಸೇಸನು " ವಿತ್ತೈಃ ರಿಕ್ತೋSಪಿ" =
ಹರಿ ಇಚ್ಛೆಯಂತೆ ರಾಜ್ಯೈಶ್ವರ್ಯವನ್ನು ತೊರೆದು ವನಕ್ಕೆ ಹೋದರೂ, ಅಕ್ಷಯಪಾತ್ರೆಯನ್ನು
ಪಡೆಯಲು "ನಾತ್ಯಲ್ಪಂ ಉಪಸರ್ಪತಿ" = ಅಲ್ಪನಾದ ಸೂರ್ಯನ ಬಳಿ ಬೇಡುವುದಿಲ್ಲ
ಹಾಗೂ ಅಸ್ತ್ರಗಳ ಲಾಭಕ್ಕಾಗಿ ಶಿವನೇ ಮೊದಲಾದ ದೇವತೆಗಳ ಬಳಿ ಕೈ ಚಾಚುವುದಿಲ್ಲ.
ಹಾಗಾಗಿ ಚಂದ್ರವಂಶದಲ್ಲಿ ಹುಟ್ಟಿಬಂದ ಭೀಮಸೇನನು ಸುಖಪೂರ್ಣನಾದ ಶ್ರೀಕೃಷ್ಣನ
ಸಂಪೂರ್ಣ ಅನುಗ್ರದಿಂದಲೇ ಮಹದೈಶ್ವರ್ಯವನ್ನು ಹೊಂದಿದನು.

ಈ ಮಾತಿಗೆ ಮತ್ತೊಂದ ದೃಷ್ಟಾಂತವೆನಿಸಬಲ್ಲ ಘನವ್ಯಕ್ತಿತ್ತ್ವವುಳ್ಳ ಉತ್ತಮಜೀವಿ
ಆಚಾರ್ಯ ದ್ರೋಣ. "ವಿತ್ತೈಃ ರಿಕ್ತೋSಪಿ " ಗೋಧನವಿಲ್ಲದವರಾಗಿದ್ದರೂ,
ಮಗನಾದ ಅಶ್ವತ್ಥಾಮನಿಗೋಸ್ಕರ ಗೋವು ಪಡೆಯುವುದಕ್ಕಾಗಿ :-

ಪ್ರತಿಗ್ರಹಾತ್ ಸನ್ನಿವೃತ್ತಃ ಸ ರಾಮಂ ಯಯೌ ನ ವಿಷ್ಣೋರ್ಹಿ ಭವೇತ್ ಪ್ರತಿಗ್ರಹಃ|
ದೋಷಾಯ ಯಸ್ಮಾತ್ ಸ ಪಿತಾSಖಿಲಸ್ಯ ಸ್ವಾಮೀ ಗುರುಃ ಪರಮಂ ದೈವತಂ ಚ||
ದಾನವನ್ನು ಸ್ವೀಕರಿಸುವುದನ್ನು ಪೂರ್ಣವಾಗಿ ತೊರೆದಿದ್ದರು ದ್ರೋಣರು ಆಕಳಿಗಾಗಿ
ಪರಶುರಾಮದೇವರ ಹತ್ತಿರ ಹೋದರು. ದೇವರು ಎಲ್ಲರಿಗೂ ತಂದೆ, ಸ್ವಾಮಿ, ಗುರು,
ಪರದೇವತೆಯಾದ್ದರಿಂದ ಅವನಿಂದ ಸ್ವೀಕರಿಸುವು ದೋಷಕರವಾಗದು ಅಲ್ಲವೆ !

ಮತ್ತೊಬ್ಬನ ಉದಾಹರಣೆ ಹೇಳುವುದಾದರೆ :- ಕುಚೇಲ

ಅವನೂ "ವಿತ್ತೈಃ ರಿಕ್ತೋSಪಿ", ಮಕ್ಕಳಿಗಾಗಿ ,ಹೆಂಡತಿಗಾಗಿ, ಅವಳ ಬಹಳ ಒತ್ತಾಯದ
ಮೇರೆಗೆ ಶ್ರೀಕೃಷ್ಣನ ಬಳಿ ಸಾರಿ ಸುಧಾಮನಾದ.

ಆದ್ದರಿಂದ ಬೇಡಿದರೆ ಎನ್ನ ಒಡೆಯನ ಬೇಡುವೆ.

#Devi #Litrature
#Muniswamygowda #ChethanaMuniswamygowda
ಈ ಮಂತ್ರಗಳನ್ನು ಪಠಿಸುವುದರಿಂದ ಭಗವಾನ್ ಶ್ರೀನಿವಾಸನ ಅನುಗ್ರಹ ದೊರಕುತ್ತದೆ ಎಂಬ ನಂಬಿಕೆಯಿದೆ.

https://youtube.com/shorts/N4-lE_LcH28?si=aSg-CBUSzt3otToK

Loading comments...