it audit

3 months ago
18

*ಪೊಲೀಸ್ ವಾಹನ ತಪಾಸಣೆ ವೇಳೆ ನಿನ್ನೆ ಮೃತ ಪಟ್ಟ ಮಗುವಿನ ಸ್ವಗೃಹಕ್ಕೆ ಸಚಿವ ಎನ್.ಚಲುವರಾಯಸ್ವಾಮಿ ಭೇಟಿ*
mandya #child #childincident #mandyapolice #kannadanews #news18kannadalive #breakingnews #breakingnewsinkannada #kannadalivetv #kannadanewslive #karnatakanewslive #kannadanewschannel #livenews #latestnews #TV9Kannada #Mandyatrafficpolice #trafficbabydeath #mimshospital #madduru #mandya #mandya #child #childincident #mandyapolice #government #pratidhvani

ವೈಯಕ್ತಿಕ ಪರಿಹಾರ ನೀಡಿ ನಂತರ ಮಾಧ್ಯಮದವರ ಜೊತೆ ಮಾತನಾಡಿದರು.ಈ ಸಂದರ್ಭದಲ್ಲಿ ಮಂಡ್ಯ ಕ್ಷೇತ್ರದ ಶಾಸಕರಾದ ರವಿಕುಮಾರ್ ಗಣಿಗ ಇದ್ದರು.

ವಾಹನ ತಪಾಸಣೆ ವೇಳೆ ಬೈಕ್ನಿಂದ ಸವಾರರು ಕೆಳಗೆ ಬಿದ್ದ ಪರಿಣಾಮ ಮೂರುವರೆ ವರ್ಷದ ಮಗುವಿನ ಮೇಲೆ ಕ್ಯಾಂಟರ್ ಹರಿದು ದುರಂತ ಸಂಭವಿಸಿದೆ.

ಹೆಲ್ಮೆಟ್ ತಪಾಸಣೆಯ ವೇಳೆ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆಯೇ ಬೈಕ್ ಸವಾರ ಮತ್ತು ಅವರೊಂದಿಗಿದ್ದ ಮಗು ಆಯತಪ್ಪಿ ಕೆಳಗೆ ಬಿದ್ದಿದ್ದರು. ಈ ವೇಳೆ ಮಗುವಿನ ಮೇಲೆ ಕ್ಯಾಂಟರ್ ಹರಿದ ಪರಿಣಾಮ ಮಗು ಸ್ಥಳದಲ್ಲೇ ಮೃತಪಟ್ಟ ಘಟನೆ ನಗರದ ಸ್ವರ್ಣಸಂದ್ರದ ಬಳಿ ಇಂದು ನಡೆದಿದೆ ಎಂದು ಪೊಲೀಸರು ತಿಳಿಸಿದರು.

ಮದ್ದೂರು ತಾಲೂಕಿನ ಗೊರವನಹಳ್ಳಿ ಗ್ರಾಮದ ಅಶೋಕ್ ಮತ್ತು ವಾಣಿ ಎಂಬ ದಂಪತಿ ತಮ್ಮ ಮೂರೂವರೆ ವರ್ಷದ ಮಗು ಹೃತೀಕ್ಷಳಿಗೆ ನಾಯಿ ಕಡಿದಿದೆ ಎಂದು ಬೈಕ್ನಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು. ಈ ವೇಳೆ ತಪಾಸಣೆ ನಡೆಸುತ್ತಿದ್ದ ಸಂಚಾರಿ ಪೊಲೀಸರು ಬೈಕ್ ಅಡ್ಡಗಟ್ಟುತ್ತಿದ್ದಂತೆ ಬೈಕ್ ಸಹಿತ ಅದರಲ್ಲಿದ್ದವರು ಆಯತಪ್ಪಿ ಬಿದ್ದರು. ಆಗ ಹಿಂದಿನಿಂದ ಬರುತ್ತಿದ್ದ ಕ್ಯಾಂಟರ್ವೊಂದು ಮಗವಿನ ಮೇಲೆ ಹರಿದಿದೆ. ಪರಿಣಾಮ ತಲೆಗೆ ತೀವ್ರ ಪೆಟ್ಟು ಬಿದ್ದು ರಕ್ತಸ್ರಾವದಿಂದ ತಮ್ಮ ಮಗು ಸ್ಥಳದಲ್ಲೇ ಮೃತಪಟ್ಟಿದೆ ಎಂದು ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.

https://youtu.be/cR2lBu19CuA?si=IP16XfvanwM7ZxA5

Loading 1 comment...